ಬರಿಯಲಿ ಏನು ಈ ಬಿಳಿಯ ಪುಟದಲ್ಲಿ ,
ಏನೋ ಕಾಡುತ್ತಿದೆ ನನ್ನ ಮನದಂತರಾಳದಲಿ
ಯಾರನ್ನು ಕೇಳಲಿ? ಯಾರಿಗೆ ಹೇಳಲಿ?
ಯಾವ ಹಾಡು ಹಾಡಲಿ? ಯಾವ ಗೀತೆ ರಚಿಸಲಿ?
ಕತ್ತಲೆಯ ಕೋಣೆಯಲಿ ಏಕಾಂಗಿಯಾಗಿ ಕುಳಿತಿರುವೆ
ಏನೋ ಯೋಚಿಸುತ್ತ ,ಕೈ ಬೆರಳು ಎಣಿಸುತ್ತಿರುವೆ ,
ಯಾರೋ ಬಂದು ಎಬ್ಬಿಸುವರೆಂಬ ಭ್ರಮೆಯಲಿ ಮುಳುಗಿರುವೆ
ಆ ಬೆಳಕಿನ ನಿರೀಕ್ಷೆಯಲಿ ಕನಸುಗಳನ್ನೇ ಪ್ರೀತಿಸುತಿರುವೆ
ಕತ್ತಲೆಯ ಕೋಣೆಯಲಿ ಹೊಸ ಕನಸು ಹೊಸೆಯುತಿರುವೆ
ಬರಿ ಕನಸುಗಳಿಂದ ಮನಸನು ಸಂತೈಸುತಿರುವೆ
ಬೆಳಕಿನ ಕಿರಣದ ನಿರೀಕ್ಷೆಯಲ್ಲಿ ಕನಸಿನಲ್ಲೇ ಬದುಕುತಿರುವೆ
ನ್ಯಜತೆಗೆ ಅಂಜಿ ಬರಿ ಕನಸುಗಳನ್ನೇ ಅವಲಂಬಿಸಿರುವೆ
ಕತ್ತಲು ಕರುಗುವ ಮುನ್ನ ಕನಸುಗಳನು ಸಂಭ್ರಮಿಸಬೇಕು
ಕವಿದ ಇರುಳು ಕರಗಿ ಕನಸುಗಳು ನನಸಾಗಬೇಕು
ಬೆಳಕು ಆವರಿಸಿದ ಮೇಲೆ ಕವಿದ ಕತ್ತಲು ಕರಗಲೇಬೇಕು
ಕತ್ತಲೇ ಕೋಣೆಯ ಬದುಕು ಬದುಕೇ ಅಲ್ಲ,
ಮನದ ದೀಪವ ಬೆಳಗೇ ಬದುಕು ಬಂಗಾರವಾಯಿತಲ್ಲ..
-Ullas A K

