Friday, 4 January 2013

ಸೀತಾಪತಿ ಅಗ್ರಹಾರ , ನನ್ನ ಜೀವನ ಬದಲಿಸಿದ ಅರಮನೆ


Poojyaya Raghavendraya Satya Dharma Ratayacha, 

Bhajatam Kalpavrikshaya Namatam Kamadhenave.

A view of sree rayaru
First floor Hall




  ಮಠ ಅಂದ್ರೆ ಸೀತಾಪತಿ ಅಗ್ರಹಾರ, ಊಟ ಅಂದ್ರೆ ಹಸ್ತೋದಕ, ಗುರುಗಳು ಅಂದ್ರೆ ರಾಯರು, ಈ ಎಲ್ಲದರ ಮಧ್ಯೆ ನಾವು ಮಠದಲ್ಲಿ ಇದ್ದುಕೊಂಡು, ಊಟ ಮಾಡಿಕೊಂಡು ಗುರುಗಳ ದರ್ಶನ ಪಡೆದುಕೊಳ್ಳೋದೆ ಒಂದು ಭಾಗ್ಯ.

 ಅಂಥಹುದರಲ್ಲಿ ನಾನು ಎರಡು ವರ್ಷ ಸೀತಾಪತಿ ಅಗ್ರಹಾರದಲ್ಲಿ ಉಳಿದುಕೊಂಡು ಪ್ರತಿದಿನ ಹಸ್ತೋದಕ ಊಟ ಮಾಡಿಕೊಂಡು, ರಾಯರ ಜೊತೆ ದಿನಾಲು ಮಾತಾಡಿಕೊಂಡು  ಇದ್ದೆ.

  ನನಗಂತು ಇಲ್ಲಿಂದ ಬಿಟ್ಟುಹೋಗೋಕ್ಕೆ ಮನಸ್ಸು ಆಗ್ತಾನೇ ಇರಲಿಲ್ಲ.  ಈ ಮುಂಚೆ ಸುಮಾರು ಸಲ ಗೆಳೆಯ ಅಂಬರೀಶ್ ಬಾಡಿಗೆ ಮನೆ ಮಾಡೋಣ ಅಂತ ಒತ್ತಾಯಿಸಿದರೂ,   ಏನೋ ನೆಪ ಹೇಳ್ಕೊಂಡು ಅಲ್ಲಿಯೇ ಉಳಿದುಕೊಂಡು ಬಿಟ್ಟಿದ್ದೆ.

   ಮಠಕ್ಕೆ ಬಂದಾಗ ನನಗೆ ಯಾವ ರೀತಿಯ ಧಾರ್ಮಿಕ  ರೀತಿ -ನೀತಿಗಳು ಗೊತ್ತಿರಲಿಲ್ಲ. ನನಗೆ ನೀಟಾಗಿ ಸಂಧ್ಯಾವಂದನೆ ಮಾಡೋಕೋ ಬರುತ್ತಿರಲಿಲ್ಲ.

   ನಾನು ಮಠಕ್ಕೆ ಬಂದಿದ್ದು ೨೦, ಜುಲೈ, 2011.  ಆವಾಗ ಸುಮಾರು ಮಧ್ಯಾಹ್ನದ 2.00 ಗಂಟೆ ಆಗಿರಬಹುದು. ಆಗ್ತಾನೆ ಊಟ ಮಾಡಿಕೊಂಡು ಮ್ಯಾನೇಜರ್    ಕೃಷ್ಣಾಚಾರ್ ಸರ್   ಚೇರ್ ಮೇಲೆ ಏನೋ ಲೆಕ್ಕಾ ಮಾಡ್ತಾ ಕೂಳ್ಳಿತಿದ್ರು. ನನ್ನ ಗೆಳೆಯ ಕಿರಣ್ ಕೊಟ್ಟ ಮಾಹಿತಿ ಮೇಲೆ ಮಠಕ್ಕೆ ಬಂದಿದ್ದೆ, ಕಿರಣ್ ಫ್ರೆಂಡ್ ನಂದಕುಮಾರ್ ಮಠದಲ್ಲಿಯೇ ಉಳಿದುಕೊಂಡಿದ್ದ  ಮಾಹಿತಿ  ಮೇಲೆ ಬಂದಿದೆ . 




open hall in mutt to enjoy the loneliness
First floor 








 ಮ್ಯಾನೇಜರ್ ಹತ್ತಿರ ಹೋಗಿ ನನಗೆ ಮಠದಲ್ಲಿರೋಕೆ ಅವಕಾಶ ಕೊಡಬೇಕೆಂದು ಕೇಳಿಕೊಂಡೆ. ಯಾವಾಗ ಅವರು ಒಪ್ಪಿಗೆ ಸೂಚಿಸಿದರೋ , ನನ್ನ ಪಾಲಿಗೆ   ಅವರು ದೇವ್ರು ಆಗ್ಬಿಟ್ರು. ಅವರು ಬೇಗ ಒಪ್ಪಲ್ಲ  ಅಂತ ಆಮೇಲೆ ಗೊತ್ತಾಯ್ತು. ನನ್ನ  ಅದೃಷ್ಟ   ಮತ್ತು  ರಾಯರ  ಆಶಿರವಾದ . 

 ಎರಡು ದಿವಸ ಬಿಟ್ಟು ಲಗ್ಗೇಜ ಸಮೇತ ಮಠಕ್ಕೆ ಬಂದೆ. ಮೊದಲಿನಿಂದಲೂ ಸ್ವಲ್ಪ ಸಭ್ಯತಾ ಹುಡುಗ ನಾನು ಎಲ್ಲದಕ್ಕೂ  ಅಡ್ಜಸ್ಟ್ ಆಗ್ತೀನಿ. ಮೊದಲನೇ ದಿನ ಬೆಳಿಗ್ಗೆ ಎಲ್ಲರು  ಸ್ನಾನ, ಸಂಧ್ಯಾವಂದನೆ, ಮಂತ್ರ, ಪೂಜೆ ಮಾಡೋಕ್ಕೆ ಶುರು ಮಾಡಿಕೊಂಡರು ನಾನು ಮಾತ್ರ ಮೂಕಪ್ರಜ್ಞನಂತೆ ಅದನ್ನೆಲ್ಲಾ  ನೋಡ್ತಾ ನಿಂತಬಿಟ್ಟೆ .

At-least  ಸುಮ್ನೆ ನೋಡೋಕಾದ್ರೂ ಸಂಧ್ಯಾವಂದನೆ ಮಾಡ್ಬೇಕು ಅಲ್ವ? ಅದೃಶಟಕೆ ನನ್ನ ಹತ್ತಿರ ಒಂದು ಸಂಧ್ಯಾವಂದನೆ ಪುಸ್ತಕ ಇತ್ತು. ಸ್ನಾನ ಮಾಡಿ ಬುಕ ತಗೊಂಡು ಏನೇನೋ ಮಾಡಿ, ಸಂಧ್ಯಾವಂದನೆ ತರಾ ಮಾಡ್ಬಿಟ್ಟೆ. 

 ಮಧ್ಯಾಹ್ನದ ಸಮಯ ಊಟ, ಹಸ್ತೋದಕದ ಸಮಯ, ಊಟ ಬಡಿಸುವುದು ನನಗೆ ಗೊತ್ತಿರಲಿಲ್ಲ. ಎಲ್ಲರಂತೆ ನಾನು ಮಡಿ ಪಂಚೆ, ಹಸಿ ಮಾಡಿಕೊಂಡು ಅಡುಗೆ ಮನೆಗೆ ಹೋದೆ ! ಘಮ ಘಮ ಬಿಸಿ ಬಿಸಿ  ಅಡುಗೆ 😋 ಏನೆಲ್ಲಾ ಐಟಮ್ಸ  ಅಂತಿರಾ aha ,  ಪಾಯಸ,  ಚಿತ್ರಾನ್ನ,  ಮೈಸೂರು ಪಾಕ್, ಎರಡು ತರಹ  ಪಲ್ಯ,  ಹುಳಿ, ಸಾರು,  ಕೋಸಂಬರಿ ಮತ್ತೆ ಮೇಜಿಗೆ .


 ಹಬ್ಬ ಹರಿದಿನ, ಆರಾಧನ ದಿನಗಳಲ್ಲಿ ಮಾತ್ರ ಇಷ್ಟೆಲ್ಲಾ ಪದಾರ್ಥ ನೋಡಿದ್ದೆ. ಆದ್ರೆ ಇಲ್ಲಿ ಪ್ರತಿದಿನ ಇದೇ ಊಟ. ಇನ್ನೂ ವಿಶೇಷ ದಿನಗಳಲ್ಲಿ ಪಂಚ ಪಕ್ವಾನ್ನವೇ  ಬಿಡಿ.

ಅದರಲೊ ದನುರ್ಮಸದ ಬಗ್ಗೆ ಹೇಳಬೇಕು ಅಂದ್ರೆಬೆಳಬೆಳ್ಳಗೆ ಊಟಅದು ಹುಗ್ಗಿಪೊಂಗಲ್ಬಿಸಿ ಬಿಸಿ ಅನ್ನಾ ಸಾರುಪಯಾಸಾ ಅದು ಬೆಳ್ಳಗೆ ೭ ಘಂಟೆ ವಳ್ಳಗೆ ಊಟ ರಡಿ ಡಿಸೇಂಬರ  ಮೈ  ಕೊರಿ  ಚಳ್ಳಿಯಲ್ಲಿ ಬೇಳಗೆ ೬ ಘಂಟೆ ಸಾನ್ನ.( ನನ್ನ ಮಟ್ಟಿಗೆ  ಅದು  ದೊಡ್ಡ  ಸಾಧನೆ ). 

A view of dinner in mutta
Dinner time

  ಇದು ಎಲ್ಲಾ ಊಟದ್ದೇ ಆದರೆ, ಕಲಿಯೋದು ಇನ್ನು ತುಂಬಾನೆ ಇತ್ತು . ಬೇರೆ ಬೇರೆ ಕಡೆಯಿಂದ ಹುಡುಗರು ಇರುವುದರಿಂದ ಬೇರೆ ಬೇರೆ ಸ್ಥಳಗಳ ಮಾಹಿತಿ ಎಲ್ಲಾಸಿಗುತ್ತಿತ್ತು , ಒಂಥರಾ  ದೇಶ ಸುತ್ತಿದಂಗೆ.  ನಾನು ಉತ್ತರ ಕರ್ನಾಟಕ  ಕಡೆ  ಜಿಲ್ಲೆಯವನಾಗಿದ್ದುದರಿಂದ, ಭಾಷೆ ಸಮಸ್ಯೆಯಾಯಿತು. ಆದರೆ ನಂತರ ಅವರೇ ಅಡ್ಜಸ್ಟ್ ಆಗಿಬಿಟ್ಟರು(ನಾನಲ್ಲ) , ನನ್ನ ಭಾಷೆ ಅವರಿಗೆ ಕಲಿಸೋಕ್ಕೆ ಶುರು ಮಾಡಿಕೊಂಡೆ. ನಮ್ಮಲ್ಲಿ ಉಡುಪಿಯಿಂದ ಬಂದ ಇಬ್ಬರು ಹುಡುಗರು ಇದ್ದರು. ಒಬ್ಬಳು ಉಡುಪಿ ಹುಡುಗಿಯನ್ನು ಇಷ್ಟ ಪಟ್ಟು ತುಳು ಕಲಿಯೋಕ್ಕೆ ಶುರು ಮಾಡಿಕೋಬಿಟ್ಟೆ. ಆದರೆ ಕಲಿಯೋ ಸೀನ್ ಆಗಿಲ್ಲ ಬಿಡಿ. ನಾನು ಒಬ್ಬ  ಉಡುಪಿ ಹುಡುಗನಿಗೆ  ಹಿಂದಿ  ಶೆಯೇರಿ  ಹೇಳ್ಕೊಡಿದೆ , ಅದು ಅವನು  ಮಹಾರಾಷ್ತ್ರ  ಹುಡಿಗೆ ಫಾರ್ವರ್ಡ್  ಮಾಡಿತಿದೆ. ಬರ್ತಾ ಬರ್ತಾ ಅವನ  ಫಾರ್ವರ್ಡ್ ಕೂಡಾ  backward ಆಯಿತು . 

ನಮ್ಮಲ್ಲಿ ಎಲ್ಲರೂ ನಳಪಾಕರು. ಸುಮಾರು ಸಲ ರಾತ್ರಿ ಅಡುಗೆ ಮಾಡಿದ್ದು ಉಂಟು. ನಮ್ಮ ಜಿಲ್ಲೆ ಟೇಸ್ಟ್, ನಿಮ್ಮ ಜಿಲ್ಲೆ ಟೇಸ್ಟ್ ಅಂತ ಏನೇನೋ ಮಾಡಿ ತಿಂದಿದ್ದುಂಟು.

 ಇನ್ನೊಂದು ವಿಶೇಷ ಅಂದ್ರೆ ಮಠದಲ್ಲಿ ಉಚಿತ  ಇಂಟರ್ನೆಟ್   ಇತ್ತು,  ಸೊ ಇಂಟರ್‍ನೆಟ್ ಯಾವಾಗಲೂ ಸಿಗೂದು. ಬರ್ತಾಬರ್ತಾ ಮಂತ್ರ ಕಲಿಯೋಕ್ಕೆ ಶುರು ಮಾಡಿಕೊಂಡೆ. ದೇವ್ರು-ದಿಂಡ್ರು ಅಂತೆಲ್ಲಾ ಪೂಜೆ, ಪ್ರದಕ್ಷಿಣೆ, ಸೇವೆ ಎಲ್ಲಾ ಶುರು ಮಾಡಿಕೋಬಿಟ್ಟೆ. ಶನಿವಾರ, ಭಾನುವಾರ ವಿಶೇಷ ಜನ, ವಿಶೇಷ ಅಡುಗೆ, ವಿಶೇಷ ಸೇವೆ, ಹೀಗೆ ಲೈಫ್‍ನಲ್ಲಿ ತುಂಬಾ ವಿಶೇಷತೆ ಕಂಡೆ.


ಮನಜೇರ ಒಂಥರಾ  ನಮ್ಮ ಪಾಲಿಗೆ  ದೇವರು ನಮ್ಮಗೆ ಎಷ್ಟೇ ಬೇಯೆದ್ದರೂ, ನಮ್ಮಗೆ ತುಂಬಾ ಪ್ರೀತಿ ಮಾಡಾತ್ತಾ ಇದ್ದರುಮಠದಲ್ಲಿ ಎಲ್ಲಾ ಅರ್ಚಕರು ಅಡುಗೆ ಮಾಡುವರು, ಬೇರೆ  ಕೆಲಸ  ಮಾಡೋರು ಪರಿಚಯ ಆಗಬಿಡ್ರುಯಾವಾಗಲೂ ಯಾರೆ ಚಹಾ ಮಾಡಿದರು ನನ್ನಗೆ ಮಿಸ್ಸ್ ಆಗತ್ತಾ ಇರಲ್ಲಿಲ್ಲಾಮನೆ ತರಾ ಬೇಳಗೆ ಎದ್ದ ಕೂಡಲೆ ರಯಾರ ಅಬೀಶೆಕ ಬಂದ ಹಾಲು ನಮ್ಮ ಚಹಾ ಪಾತ್ರೆಯಲ್ಲಿ ಸ್ವಲ್ಪ  ಬಿಳ್ತಾಇತು.


just click in room
Just Click 


  ಆ ಒಂದು ವರ್ಷದಲ್ಲಿ ಮಠಕ್ಕೆ ಸಂಬಂಧಪಟ್ಟ, ಮಠಕ್ಕೆ ಯಾವಾಗಲೂ ಬರುವವರೆಲ್ಲರೂ ಅವಾಗ ಅವಾಗ ಬರುವವರೆಲ್ಲರೂ ಪರಿಚಯ ಆಗಿಬಿಟ್ಟರು. ಆದ್ರೆ ಅಕ್ಕಪಕ್ಕ ಮನೆಯವರು ಇನ್ನೂ  ಮಾತ್ರ  ಪರಿಚಯವೇ ಇಲ್ಲ. 
ಬರ್ತಾ ಬರ್ತಾ ಮಠವೇ ಕ್ಲೋಸ್ ಆಗಿಬಿಟ್ಟಿತು. ನಾನು ಅಲ್ಲಿ ಇದ್ದಾಗ ನಂದಕುಮಾರ್, ಗಣೇಶ್, ಪ್ರಭಂಜನ್, ಅನಿರುದ್ಧ್, ಕಿರಣ್, ಪವನ್, ದಾಮೋದರ್, ಆವಾಗ ಅವಾಗ ಬರುವ ಅಪರೂಪದ ಉಡುಪಿಯ ಯತಿರಾಜ್ , ಮೈಸೂರಿನ  ರಘುರಾಮ್, ವಿನಯ್ ,ವಿಜಯ್ ಮತ್ತು  ಮಂತ್ರಾಲಯದ  ವಿದ್ಯಾಪೀಠದ  ವಿದ್ಯಾರ್ಥಿಗಳು , ಹೀಗೆ  ಬದುಕು  ಹೊಸ ಆಯಾಮದಲ್ಲಿ ಶುರುವಾಯ್ತು.



Some of mutta friends
ವಿದ್ಯಾರ್ಥಿಗಳು 



ಮೊದಲು ಬಂದಾಗ ಕೈಯಲ್ಲಿ ಕೆಲಸ ಇರಲಿಲ್ಲ. ಮಠಕ್ಕೆ ಬಂದವರಿಗೆ ಹಾಯ್ ಹೇಳೋದು, ಹೋಗೋರಿಗೆ ಬಾಯ್ ಹೇಳೋದು ನನ್ನ ಕೆಲಸ ಆಗಿತ್ತು. ಎರಡು ಹೊತ್ತು ಪಂಚ ಪಕ್ವಾನ ಊಟ ಮಾಡಿ, ರಾತ್ರಿ ಇಡೀ ಹರಟೆ ಹೊಡೆಯೋದೆ ನನ್ನ ಕೆಲಸ. ಬೇಡ ಬೇಡ ಅಂದ್ರೂ ಯಾವುದಾದರೊಂದು ಟಾಪಿಕ್ ನಮ್ಮದ್ದೇ ಸಿಕ್ಕಿಹಾಕಿಕೊಂಡು ನನ್ನ ಬಗ್ಗೆ ಮಾತಾಡಿ, ನನ್ನ ಬಗ್ಗೆ ಮಾತಾಡಿ ಅಂತ ಹೇಳುತ್ತಿದ್ದು.  ನಾವು ಕೂಡ ಯಾವ ಟಾಪಿಕ್‍ಗೂ ನಿರಾಶೆ ಮಾಡಿಲ್ಲ. ಯಾವುದೇ ವಿಶೇಷ ಇರಲಿ, ಎರದೇ  ಇರಲಿ, ಎಷ್ಟು ಸಾಧ್ಯಾನೋ ಅಷ್ಟು ಮಾತಾಡ್ತಾ ಇದ್ವಿ. ಮಾಮೂಲಿಯಾಗಿ ರಾತ್ರಿ ಊಟಕ್ಕೆ ಕೂತಾಗ ಶುರುವಾದ  ಹರಟೆ  ರಾತ್ರಿ 1.00 ಗಂಟೆವರೆಗೂ ಜೋರು ಜೋರಾಗಿ ಚರ್ಚೆ ಆಗ್ತಾ ಇತ್ತು.
ನಮಗೆ ಬಿಡಿ, ನಮ್ಮ ಅಕ್ಕಪಕ್ಕದವರಿಗೂ ಎಷ್ಟು ರೂಢಿಯಾಗಿತ್ತು ಅಂದ್ರೆ, ನಾವು ಒಂದು ರಾತ್ರಿ ಚರ್ಚೆ ಮಾಡಿಲ್ಲ ಅಂದ್ರೆ,  ಅವರಿಗೆ ನಿದ್ದೇನೆ ಬರ್ತಾ ಇರಲಿಲ್ಲವಂತೆ.!!!!!!


Me with ready for utta or(otta)
ನಾನು  ಮತ್ತು  ಅಕ್ಷತೆ 


ಚಾಮರಾಜಪೇಟೆ ಹಳೇ ಏರಿಯಾ ಅಷ್ಟು ಚಾರ್ಮ್ ಆಗಿಲ್ಲ. ಸುಮಾರು  ೭೫  ವರ್ಷದ ಹಳೆ ಮಠ, ಅಕ್ಕ ಪಕ್ಕ  ಎಲ್ಲಾ ಹಳೇ ಕಟ್ಟಡ,  ಹಳೇ ರಸ್ತೆ,  ಹಳೇ ರೂಡು ,  ಹಳೇ ಜನ. ಆದ್ರೂ ಏರಿಯಾ ಮಾತ್ರ ಸುಪರ್  ಕೂಲ್, ಈ ರೋಡ್‍ನಲ್ಲಿ ಸಾಂಗ್ ಕೇಳ್ಕೊಂಡು ಸಕ್ಕತ್ತಾಗಿ ಸುತ್ತಾಡಬಹುದು. ಅಂತು ಇಂತು ಪಕ್ಕಾ ಅಡ್ಜಸ್ಟ್ ಆಗ್ಬಿಟ್ಟೆ, ಆ ಮಠ, ಆ ಊಟ, ಆ ಪಾಠ ಎಲ್ಲಾ ಅಡ್ಜಸ್ಟ್ ಆಗಿ ಹೋಯ್ತು.


   ನಾನು ಮಠದಲ್ಲಿ ಇಂದ್ದಿದು ನನ್ನ ತಂದೆ ತಾಯಿ ಅಥವಾ ಹಿರಿಯರ ಪುಣ್ಯ. ಅಮ್ಮ ಯಾವಾಗಲೂ ಹೇಳ್ತಾ ಇದ್ದಳು ನಾನು ತುಂಬಾ ಅದೃಷ್ಟವಂತ ಅಂತಾ ಎಂದು. ಮುಂಚೆ ನಾನು ನಂಬುತಾ ಇರಲಿಲ್ಲ. ಆದರೆ ಇತ್ತೀಚೆಗೆ ಹೌದೇನೋ ಅನ್ನಿಸುತ್ತಿದೆ. ಕಷ್ಟ ಅಂತೂ ತುಂಬಾ ಪಟ್ಟಿದ್ದೀನಿ. ಆದರೆ ನನ್ನ ಪ್ರಯತ್ನಕ್ಕೆ ದೇವರು ಎಂದೂ ಮೋಸ ಮಾಡಿಲ್ಲ. ನನ್ನ ಪ್ರಕಾರ ಅದೇ ಅದೃಷ್ಟ.  ನಾನು ಕೇಳಿರೋ 10 ರಲ್ಲಿ ೭ ಆದ್ರು  ನಿಜ ಆಗಿವೆ . ಇನ್ನೂ 3 ತುಂಬಾ  ಜಾಸ್ತಿ  ಕೇಳಿರಬೇಕು ಅದಕ್ಕೆ ದೇವರು ನಕ್ಕುಬಿಟ್ಟು ಸದ್ಯಕ್ಕೆ ೭ ಇರಲಿ, ಇನ್ನೂ 3 ಬೇಕಾದಾಗ ನಾನು ಕೊಡ್ತೀನಿ ಅಂದಿರಬೇಕು.


ಈ ಎಲ್ಲಾ ಅದೃಷ್ಟದ ಮಧ್ಯೆ, ಬೇಜಾರಾದ ಸಂಗತಿ ಅಂದ್ರ ಮಠ ಬಿಡ್ತಾ ಇರೋದು. ಇನ್ಮುಂದೆ ಬಾಡಿಗೆ ಮನೆ, ಬಾಡಿಗೆ ಜೀವನ, ಬಾಡಿಗೆ  ಊಟ,  ಬಾಡಿಗೆ ಭಾವನೆ.  ನಾನು ಮಠಕ್ಕೆ ಎಷ್ಟು ಅಚ್ಚುಕೊಂಡಿದ್ದೇ ಅಂದ್ರೆ ರೂಮ್ ಮಾಡಿ ಒಂದು ತಿಂಗಳ ಬಾಡಿಗೆ ಕೊಟ್ಟರೂ, ಮಠ ಬಿಟ್ಟಿರಲಿಲ್ಲ. ಆದರೂ ಗಟ್ಟಿ ನಿರ್ಧಾರ ಮಾಡಿ ರೂಮ್‍ಗೆ ಶಿಪ್ಟ್ ಆದೆ. ರೂಮ್‍ಗೆ ಬಂದು ಒಂದು ವಾರಕ್ಕೆ ಒಂಥರಾ  ಆಗಿಬಿಟ್ಟಿತು. ರೂಮ್ ಬಿಟ್ಟು ಮಠಕ್ಕೆ ಹೋಗಬೇಕೆನ್ನಿಸಿತು. ಆಗೋ-ಹೀಗೋ ಫ್ರೆಂಡ್ಸ್ ಜೊತೆ ರೂಮ್‍ಲ್ಲೇ ಇರೋಕೆ ಡಿಸೈಡ್ ಮಾಡಿಬಿಟ್ಟೆ.

      ತುಂಬಾ ಸಲ ಅಂಕೂತ್ತೀನಿ, ಮಠಕ್ಕೆ ನಾನು  ಬಂದಿರಲಿಲ್ಲಾ ಅಂದ್ರೆ  ಕೇವಲ ನನ್ನ ಜಾತಿ ಮಾತ್ರ ಬ್ರಾಹ್ಮಣ ಆಗತ್ತಿತು ಹೊರತು ನನ್ನ ರೀತಿ -ನೀತಿ ಅಲ್ಲ. ಮನೆ  ಹಿರೀಯರು ಹೇಳಿಕುಡದ  ಸಂಸ್ಕಾರ  ಈ  ಮಠ ಕಳ್ಸಿತು .  ಈ ವಿಚಾರ ಕಡೆ ವರೆಗೂ  ಪಲಿಸೂದು ಮಾತ್ರ ನನ್ನ ಮುಂದಿರು ಸವಾಲು . ಮಠಕ್ಕೆ ನಾನು ಬರಲಿಲ್ಲಾ ಅಂದ್ರೆ ನಾನು  ಜೀವನದಲಿ  ತುಂಬಾ ವಿಷಯಗಳು  ಮಿಸ್  ಮಾಡಿಕೊಳ್ಳಿತ್ತಿದೆ . 

A cute cat in mutt
A cute cat

ಮಠಕ್ಕೆ ಈಗ ನಾನು ಅತಿಥಿಯಾಗಿ ಬಿಟ್ಟೆ. ಪ್ರತಿ ಶನಿವಾರ, ಭಾನುವಾರ ಮಠಕ್ಕೆ ಹೋಗ್ತೇನೆ. ಊಟ ಮಾಡಿ, ಹರಟೆ ಹೊಡೆದು ಬರ್ತೀನಿ. ಸಮಯ ಸಿಕ್ಕಾಗ ಕಿವಿಯಲ್ಲಿ  ear-phone ಹಾಕಿಕೊಂಡು  ಸಾಂಗ್ ಕೇಳುತ್ತಾ, ಬಸವನಗುಡಿ, ಗಾಂಧಿ ಬಜಾರ್, ಆಶ್ರಮ, ಅಂತ ಎಲ್ಲಾ ಸುತ್ತಾಡಿಕೊಂಡು ಹಳೇದೆಲ್ಲ flash back ಮಾಡಿಕೊಂಡು ಬರ್ತೀನಿ .

ಈಗ ಏನಿದ್ದರೂ ಮಠಕ್ಕೆ ನಾನು ಹಳೆಯ ವಿದ್ಯಾರ್ಥಿ.


Ullas
NSRS Mutt